ಪದ್ಯಪಾಠ -7. ವೀರಲವ
ಘಟಕ ಪರೀಕ್ಷೆ - 2025-26
(2015 ರಿಂದ 2025 ರವರೆಗಿನ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳನ್ನು ಆಧರಿಸಿದೆ )
I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 1 x 5 = 5.
1.ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು? [2015RF,2018RF,2020RR,2021RR 2022RR]
2 .ವಾಲ್ಮೀಕಿ ಋಷಿಗಳು ಲವನಿಗೆ ಹೇಳಿ ಹೋಗಿದ್ದು ಏನು ? [2021RF]
3. ವೀರ ಲವ ಪದ್ಯದಲ್ಲಿ ನಾವು ಮೆಚ್ಚಿಕೊಳ್ಳಬೇಕಾದ ಅಂಶ ಯಾವುದು ? [2021RF]
4. ಮುನುಸುತರು ಹೆದರಲು ಕಾರಣ [2021RR, 2025(1) ]
5 .ಯಜ್ಞಾಶ್ವವನ್ನು ಕಟ್ಟಿದವರು ಯಾರು? [2023Rf]
II ಎರಡು ಅಂಕದ ಪ್ರಶ್ನೆಗಳು. 2 x 2 = 4
1.ಯಜ್ಞಾಶ್ವದ ಹಣೆಯಲ್ಲಿದ್ದ ಫಲಕದಲ್ಲಿ ಏನೆಂದು ಬರೆಯಲಾಗಿತ್ತು? [2015RR]
2.ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ. [2015RR ,2018RF]
III ಸಂದರ್ಭದ ಪ್ರಶ್ನೆಗಳು. ( ಯಾವುದಾದರೂ ಒಂದು ಪ್ರಶ್ನೆಗೆ ) 1 x 3 = 3
1.“ಜಾನಕಿಯ ಮಗನಿದಕೆ ಬೆದರುವನೆ” [2016RF, 2022RR]
2.“ಪಾರ್ವರ ಮಕ್ಕಳು ಅಂಜಿದೊಡೆ ಜಾನಕಿಯ ಮಗನಿದಕೆ ಬೆದರುವನೆ” [2020RR]
3.“ತನ್ನ ಮಾತೆಯಂ ಸರ್ವಜನಮಂ ಬಂಜೆಯೆನ್ನದಿರ್ದಪುದೆ [2016RR,2018RR,2019RF,2023RF] 4.“ಅರಸುಗಳ ವಾಜಿಯಂ ಬಿಡು ” [ 2019RR]
5.” ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮಂ” 2025(1)
IV ಭಾವಾರ್ಥದ ಪದ್ಯಗಳು. ( ಯಾವುದಾದರೂ ಒಂದು ಪ್ರಶ್ನೆಗೆ ) 1 x 4 = 4
1.ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ |
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ |
ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು||
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ |
ನಗಡುತನದಿಂದ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು. [2020RF, 2023RR , 2024(1)]
2. ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ |
ನೊರ್ವನೇ ವೀರಾನತನ ಯಜ್ಞನತುರಗಮಿದು |
ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ|| [2022RF, 2024(3) ]
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ |
ಸರ್ವಜನಮುಂ ಬಂಜೆಯೆನ್ನದಿರ್ದಪುz É ತನ |
ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು.
V 8-10 ವಾಕ್ಯದ ಪ್ರಶ್ನೆಗಳು ( ಯಾವುದಾದರೂ ಒಂದು ಪ್ರಶ್ನೆಗೆ ) 1 x 4 = 4
ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವಾದ ಅಂಶಗಳನ್ನು ಸಂಗ್ರಹಿಸಿ ಬರೆಯಿರಿ 2024 (2)
ಲವನಲ್ಲಿದ್ದ ಸಹಜ ಕ್ಷಾತ್ರಗುಣ ʻವೀರಲವʼ ಪದ್ಯದಲ್ಲಿ ವ್ಯಕ್ತಗೊಂಡಿರುವುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ 2024 (2)
ಕವಿ ಪರಿಚಯ : 1 x 3 = 3
1 ಲಕ್ಷ್ಮೀಶ [2015RF ,2017RF,2017RR]